ಕೂಡಿಸುವ, ಆನಿಸುವ ಅಂಗಾಂಶಗಳು

	ಒoಜeಡಿಟಿ ಣeಡಿm-(ಸಂಯೋಜಕ ಅಂಗಾಂಶಗಳು).
ದೇಹದ ಅಂಗ ಮತ್ತು ಅಂಗಾಂಶಗಳನ್ನು  ಒಂದರೊಡನೆಂದು ಕೂಡಿಸುವ  ರಚನಾತ್ಮಕ ಅಂಗಾಂಶ ಸಮೂಹಕ್ಕೆ  ಸಂಯೋಜಕ ಅಂಗಾಂಶಗಳೆಂದು ಹೆಸರು. ಈ ಅಂಗಾಂಶವು  ಭ್ರೂಣದಲ್ಲಿನ  ಮೂಲ ನನೆಚೆಂಡು ಕುಡಿ ನಡುಪದರದಿಂದ  ರೂಪುಗೊಳ್ಳುತ್ತದೆ. ಇದು  ದೇಹದೆಲ್ಲಡೆ ಅತ್ಯಂತ ವ್ಯಾಪಕವಾಗಿ ಕಂಡು ಬರುವ  ಅಂಗಾಂಶ. ಇವುಗಳ ಮೂಲ ಒಂದೇ ಆಗಿದ್ದರು ಸ್ಥಾನಕ್ಕೆ ತಕ್ಕಂತೆ  ರಚನೆ, ರೂಪ ಮತ್ತು ಕಾರ್ಯದಲ್ಲಿ  ಅನೇಕ ಮಾರ್ಪಾಟುಗಳನ್ನು ತೋರುತ್ತವೆ. ಈ ಅಂಗಾಂಶಗಳಿಗೆ  ಹೆಚ್ಚಿನ ರಕ್ತ ಪೂರೈಕೆ ಇರುವುದರಿಂದ  ಅವು ಉಳಿದ ಅಂಗಾಂಶಗಳಿಗೆ ಜೀವ ಪೋಷಕ ದ್ರವ್ಯಗಳನ್ನು  ಒದಗಿಸುವ ಹಾಗೂ  ಚಯಾಪಚಯ  ಕಾರ್ಯದಲ್ಲಿ  ಬಿಡುಗಡೆಯಾಗುವ ವಸ್ತುಗಳ ವಿನಿಮಯಕ್ಕೂ ಸಹಾಯಕ.

	ರಚನೆ, ರೂಪ ಮತ್ತು ಕಾರ್ಯ ವೈವಿಧ್ಯತೆ ತೋರಿದರೂ ಸಂಯೋಜಕ ಅಂಗಾಂಶಗಳು ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು  ಹೊಂದಿದೆ. ಅವುಗಳೆಂದರೆ,

1. ವೈವಿಧ್ಯಮಯ ರಾಸಾಯನಿಕ ಸಂಯೋಜನೆಯಿಂದಾದ ತಳವಸ್ತು ಅಥವಾ ಮಾತೃಕೆ. ಮಾತೃಕೆಯ ಆಧಾರದ ಮೇಲೆ ಈ ಅಂಗಾಂಶಗಳನ್ನು  ವರ್ಗೀಕರಿಸಬಹುದು,

2. ಮಾತೃಕೆಯಲ್ಲಿ ವಿಶಿಷ್ಟ ತಂತು ರೇಖೆಗಳು (ಈibಡಿobಣಚಿsಣ) ಇವೆ. ಇವು ಮಾತೃಕೆಗೆ ಯಾಂತ್ರಿಕ ಬಲ ಒದಗಿಸುವ ತಂತುಗಳನ್ನು ಉತ್ಪಾದಿಸುತ್ತದೆ, ತಂತುಗಳಲ್ಲಿ ಮೂರು ವಿಧಗಳನ್ನು  ಗುರುತಿಸಬಹುದು. ಅವೇ, ಬಿಳಿ ತಂತುಗಳು (ಕೊಲಾಜಿನ್), ಹಳದಿ ತಂತುಗಳು (ಇಲಾಸ್ಟಿನ್) ಮತ್ತು ಜಾಲರೂಪಿ ತಂತುಗಳು (ಖeಣiಛಿuಟಚಿಡಿ).
ಕಾರ್ಯಗಳು:-

1. ಅಂಗ ಮತ್ತು ಅಂಗಾಂಶಗಳ ಜೋಡಣೆಗೆ ಅತ್ಯವಶ್ಯಕ. ಹಾಗೂ ಅವುಗಳಿಗೆ  ರಕ್ಷಣೆಯನ್ನೂ ನೀಡುವುದು.
2. ದೇಹದ ಯಾವುದೇ ಖಾಲಿ ಸ್ಥಳವನ್ನು ತುಂಬಿಸಿ ಅಂಗಗಳಿಗೆ ಬೆಂಬಲ ಮತ್ತು ರಕ್ಷಣೆ ನೀಡುತ್ತದೆ. 
3. ರಕ್ತ ಪೂರೈಕೆಯಿಲ್ಲದ ಅನುಲೇಪಕ ಅಂಗಾಂಶಗಳ  ಕೆಳಗೆ ಕಂಡು ಬರುವ ಸಂಯೋಜಕಾ ಅಂಗಾಂಶವು   	ಅನುಲೇಪಕ ಕೋಶಗಳಿಗೆ  ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತದೆ.
4. ಶರೀರಕ್ಕೆ ರೂಪ ಮತ್ತು ಬೆಂಬಲ ನೀಡುವ ಅಸ್ತಿಪಂಜರ ಸಂಯೋಜಕಾ ಅಂಗಾಂಶದ ರಚನೆ.
5, ರಕ್ತ ರೂಪದಲ್ಲಿ ಅಗತ್ಯ ವಸ್ಯುಗಳ ಸರಬರಾಜು ಮಾಡುವುದು.
6. ಸಂಯೋಜಕಾ ಅಂಗಾಶದಲ್ಲಿನ  ಜೀವಕೋಶಗಳು ಹೆಪಾರಿನ್, ಹಿಸಯಮಿನ್ ಮುಂತಾದ ವಸ್ತುಗಳನ್ನು ಸ್ರವಿಸುತ್ತದೆ.  ಹೆಪಾರಿನ್ ರಕ್ತ ಹೆಪ್ಪುಗಟ್ಟುವಿಕೆಯನ್ನು  ತಡೆಯಲು ಸಹಾಯಕ ಹಿಸ್ಟಮಿನ್ ಅಲರ್ಜಿ ಅಥವಾ ಒಗ್ಗದಿರುವಿಕೆಯಲ್ಲಿ ಉರಿಯೂತ ಉಂಟಾಗಿಸುತ್ತದೆ.
7. ಮಾರ್ಪಾಟಾದ  ಕೊಬ್ಬು ಕೋಶಗಳಲ್ಲಿ ಆಹಾರ  ಸಂಗ್ರಹಣೆ ಮಾಡಿಕೊಂಡು ಅಗತ್ಯವಿದ್ದಾಗ ಶಕ್ತಿಯನ್ನು ಒದಗಿಸುತ್ತದೆ.
8. ಬಿಳಿ ರಕ್ತ ಕಣಗಳು ದೇಹ ರಕ್ಷಣೆಯಲ್ಲಿ  ನೆರವಾಗುತ್ತದೆ. 	

ವರ್ಗೀಕರಣ:

ಸಂಯೋಜಕ ಅಂಗಾಂಶಗಳನ್ನು  ಅವುಗಳ ರೂಪಕ್ಕನುಗುಣವಾಗಿ ಮೂರು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು. ಅವೇ
1. ನೈಜ ಸಂಯೋಜಕ ಅಂಗಾಂಶÀ
2. ಆಧಾರಕ ಸಂಯೋಜಕ ಅಂಗಾಂಶ
3. ದ್ರವ ರೂಪಿ ಸಂಯೋಜಕ ಅಂಗಾಂಶ					
					ಸಂಯೋಜಕ ಅಂಗಾಂಶಗಳು

 ನೈಜ ಸಂಯೋಜಕ ಅಂಗಾಂಶ	  ಆಧಾರಕ ಸಂಯೋಜಕ ಅಂಗಾಂಶ		ದ್ರವ ರೂಪಿ ಸಂಯೋಜಕ ಅಂಗಾಂಶ

ಅ. ಏರಿಯೋಲಾರ್ ಅಂಗಾಂಶ 		ಮೃದ್ವಸ್ಥಿ						ರಕ್ತ
ಆ. ಫೈಬ್ರಸ್ ಅಂಗಾಂಶ 			ಎಲಬು/ಮೂಳೆ					ದುಗ್ಧರಸ
ಇ. ಎಲಾಸ್ಟಿಕ್ ಅಂಗಾಂಶ
ಈ. ಅಡಿಪೋಸ್ ಅಂಗಾಂಶ
ನೈಜ ಸಂಯೋಜಕ ಅಂಗಾಂಶ :

ಇದರಲ್ಲಿ  ಮಾತೃಕೆಯು ಸಮ ಜಾತೀಯ  (ಊomogeಟಿeous) ವಾಗಿರುತ್ತದೆ. ವಿಷಿಶ್ಟ ಜೀವಕೋಶಗಳು, ವಿವಿಧ ರೀತಿಯ ತಂತುಗಳು ಮಾತೃಕೆಯಲ್ಲಿದ್ದು ಇದನ್ನು ಬಂಧಕ ಅಂಗಾಂಶ ಅಥವಾ ಸಡಿಲ ಸಂಯೋಜಕಾ ಅಂಗಾಂಶ ಎಂದೇ ಅದರ ಕಾರ್ಯ ಸೂಚಿಯಂತೆ ಗುರುತಿಸಲಾಗುತ್ತದೆ.

ಸಂಯೋಜಕ ಅಂಗಾಂಶದ ಜೀವಕೋಶಗಳು : 

ತಂತುಕೋಶಗಳು (ಫೈಬ್ರೋಸೈಟ್ಸ್):- ಚಪ್ಪಟೆಯಾದ  ಹಲವು ಜೀವರಸ ಚಾಚುಕೆಗಳಿರುವ  ಕೋಶ, ಇವು ತಂತುಗಳನ್ನು  ಉತ್ಪಾದಿಸುವ ಕೋಶಗಳು.

ಭಕ್ಷಕ ಕೋಶಗಳು:- (ಮಾಕ್ರೇಪೇಜಸ್/ಹಿಸ್ಟಿಯೇಸೈಟ್ಸ್)
ಅಮೀಬಾಕಾರದ ಇವು ರೊಗಕಾರಕ ಜೀವಿಗಳನ್ನು ನೇರವಾಗಿ ಬಕ್ಷಿಸಿ ಶರೀರವನ್ನು ರಕ್ಷಿಸಲು ಸಹಾಯಕ.
ಪ್ಲಾಸ್ಮಾ ಕೋಶಗಳು ( ಮಾಸೈಸೆಲ್ಸ್) :-

ಅಂಡಾಕೃತಿಯ  ಈ ಕೋಶಗಳು ಹೆಪಾರಿನ್ ಎಂಬ ರಕ್ತ ಹೆಪ್ಪುಗಟ್ಟುವುದನ್ನು  ತಡೆಯುವ ಮತ್ತು ರಕ್ತನಾಳದ  ಮೇಲೆ ಪ್ರಭಾವ ಬೀರುವ ಹಿಸ್ಟೋಮಿನ್ ಮತ್ತು  ಸೆರಟೇನಿನ್ ಎಂಬ ರಾಸಾಯನಿಕಗಳನ್ನು ಸ್ರವಿಸುತ್ತದೆ. 

	ತಂತುಗಳು:  ಇವುಗಳಲ್ಲಿ ಮೂರು ಮುಖ್ಯ ಬಗೆಗಳಿವೆ: ಅಂಟುಜನಕ, ನವಿರುಜಾಲಕ, ಹಿಂಪುಟಿಕ (ಎಲಾಸ್ಟಿಕ್). ಅಂಟುಜನಕ ತಂತುಗಳನ್ನು ಕಂಡರಗಳಲ್ಲಿ ಚೆನ್ನಾಗಿ ಕಾಣಬಹುದು. ಹಸಿಯಾಗಿದ್ದಾಗ ಬೆಳ್ಳಗಿದ್ದು ಕಿತ್ತರೆ ಹಿಗ್ಗದೆ ಬಲುಗಡುಸಾಗಿರುತ್ತವೆ. ನಿಜಚರ್ಮದ (ಡರ್ಮಿಸ್) ಕೂಡಿಸುವ ಅಂಗಾಂಶದಲ್ಲಿ ಇವೇ ಮುಖ್ಯವಾದವು.  ನಿಜಚರ್ಮವನ್ನು ಹದಮಾಡಿದಾಗ ತೊಗಲು(ಲೆದರ್) ಆಗುತ್ತದೆ. ಅಂಟುಜನಕದ ತುಂಬ ಉದ್ದುದ್ದನೆಯ ತಂತು ತಂಡಗಳಿರುತ್ತವೆ. ಬಿಡಿ ತಂತುಗಳು ಕವಲೊಡೆಯವು. ತಂತುಗಳ ಕಟ್ಟುಗಳಲ್ಲಿ ನೀಳ ಪಟ್ಟಿಗಳಿರುವುವು. ಕ್ಷಾರದಲ್ಲಿ ನೆನೆಸಿದರೆ ಇನ್ನೂ ನವಿರಾದ ಎಳೆಗಳನ್ನು ಬಿಡಿಸಬಹುದು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಇವುಗಳಲ್ಲಿ ಇನ್ನೂ ನವಿರಾದ ಎಳೆಗಳಿರುತ್ತವೆ. ಚರ್ಮ, ಕಂಡರಗಳಲ್ಲಿರುವ ಅಂಟುಜನಕವನ್ನು ಸಾರರಿಕ್ತ ಅಸೆಟಿಕ್ ಆಮ್ಲ ಇಲ್ಲವೇ ಸೋಡಿಯಂ ಸಿಟ್ರೇಟಿನಲ್ಲಿ ಕರಗಿಸಿ ಈ ಎಳೆಗಳನ್ನು ಎಂದಿನಂತೆ ಸುತ್ತಿ ರೂಪಿಸಬಹುದು. ಬಿಸಿನೀರಿನಲ್ಲಿ ಕರಗಿದ ಅಂಟುಜನಕಕ್ಕೆ ಜೆಲಟಿನ್ ಎಂದು ಹೆಸರು. ಪೆಪ್ಸಿನ್, ಕೊಲ್ಲ್ಯಾಜಿನೇಸ್ ಮುಂತಾದ ಕಿಣ್ವಗಳಿಂದ ಆದರೆ ಟ್ರಿಪ್ಸನ್ನಲ್ಲಿ ಕರಗದು. ಅಂಟುಜನಕ ಪ್ರೋಟೀನಿದಾಗಿದೆ. ಇನ್ನಾವ ಪ್ರೋಟೀನುಗಳಲ್ಲೂ ಇರದ ಅಮೈನೋ ಆಮ್ಲವಾದ ಹೈಡ್ರಾಕ್ಸಿಪೋಲೀನ್ ಇದರಲ್ಲಿ ಹೇರಳವಾಗಿದೆ. ಈ ಅಮೈನೋ ಆಮ್ಲ ಸುರುಳಿ ಸರಪಣಿಯಂತೆ ಒಂದಕ್ಕೊಂದು ಜೋಡಿಸಿದೆ. ಜೀವಿಯಲ್ಲಿ ಈ ತಂತುಗಳು ವಿಕಾಸವಾಗುವ ಬಗೆಗೊತ್ತಿಲ್ಲ.

	ಹಲವು ಅಂಗಗಳ ಆನಿಸುವ ರಚನಾಂಶದಲ್ಲಿ ನವಿರಾದ ಜೀವಕಣದಾಚಿನ ತಂತುಗಳ ಹಾಗೆ ನವಿರುಜಾಲಕ ತಂತುಗಳಿರುವುವು. ಇವು ಕವಲೊಡೆಯುತ್ತ ಒಂದಕ್ಕೊಂದು ಕೂಡಿಕೊಂಡು ಬಲೆಯ ಹಾಗಿರುತ್ತವೆ. ಅಂಟುಜನಕ ತಂತುಗಳ ಹಾಗೆ ಇವು ಬೈರೆಫ್ರಿಂಜೆಂಟ್. ನವಿರುಜಾಲಕ ಕಣಗಳನ್ನೂ ಪೆಪ್ಸಿನ್ ಕಿಣ್ವ ಕರಗಿಸುತ್ತವೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ನವಿರುಜಾಲಕ ವಸ್ತು ಅಲ್ಲಲ್ಲಿ ಪದರುಗಳಂತೆ ತೋರುವುದು. ಇವೂ ಪ್ರೋಟೀನುಗಳೇ. ಇದರಲ್ಲೂ ಹೈಡ್ರಾಕ್ಸಿಪ್ರೋಲೀನ್ ಅಮೈನೋ ಆಮ್ಲವೇ ಹೆಚ್ಚು. ಬಿಸಿನೀರಿನಲ್ಲಿ ಕರಗಿದರೂ ತಣ್ಣಗಿಸಿದಾಗ ಇದು ಜೆಲಟಿನ್ ಆಗದು.

	ಹಿಂಪುಟಿಕ ತಂತುಗಳು ಹಳದಿಯಾಗಿರುವುವು. ದೊಡ್ಡ ಧಮನಿಗಳಲ್ಲಿ ಇರುವಂತೆ ಈ ತಂತುಗಳು ಉದ್ದಕ್ಕೆ ತೆಳುವಾಗಿ ಕವಲೊಡೆಯುತ್ತ ತಟ್ಟೆಗಳು ಇಲ್ಲವೇ  ತೂತುಗಳಿರುವ ಪೊರೆಗಳಾಗಿರುತ್ತವೆ. ತಂತುಗಳಿರುವುದು ಹೊರಗಾಣದು. ಹಿಡಿದು ಕೀಳದಿದ್ದರೆ ಬ್ಯೆರೆಫ್ರಿಜೆಂಟ್ ಆಗುವುದು. ಬಿಸಿನೀರು, ಸಾರಕ್ಷಾರ, ಟ್ರಿಪ್ಸಿನ್‍ಗಳಲ್ಲಿ ಕರಗವು. ಮಾಂಸಲಿಯಲ್ಲಿರುವ ಎಲಾಸ್ಟೇಸ್‍ನಿಂದ ಮಾತ್ರ ಕರಗುತ್ತವೆ. ಕರಗಿಸಿದಾಗ ಒಂದಕ್ಕೊಂದು ಹೆಣೆದು ಕೊಂಡು ತಂತು ಎಳೆಗಳು ಕಾಣಬರುತ್ತವೆ. ಇವು ಹುರಿಗಟ್ಟಿ ಇನ್ನೂ ದೊಡ್ಡ ತಂತುಗಳಾಗಿರುವುವು. ಇವುಗಳಲ್ಲಿನ ಪ್ರೋಟೀನೇ ಬೇರೆ ಬಗೆಯದು. ಕೊಬ್ಬೂ ಇದರಲ್ಲಿರುತ್ತದೆ. ಇವು ರಬ್ಬರಿನಂತೆ ಹಿಗ್ಗುತ್ತವೆ. ಪುಪ್ಪುಸ, ರಕ್ತನಾಳದ ಗೋಡೆಗಳು, ಕಂಡರಗಳು. ಮೆಲ್ಲೆಲುಬುಗಳು ರಬ್ಬರಿನಂತೆ ಹಿಗ್ಗಲು ಈ ತಂತುಗಳೇ ಕಾರಣ.

	ಕಚ್ಚಾ ನೆಲಗಟ್ಟು ವಸ್ತು: ಇದು ತಂತುಗಳು, ಜೀವಕಣಗಳ ನಡುವೆ ಅಲ್ಲದೆ ಸುತ್ತಲೂ ಇರುವ ವಸ್ತು. ಮೆಲ್ಲೆಲುಬು, ಹೊಕ್ಕಳು, ಹುರಿಯ ಜೆಲ್ಲಿ, ಕಣ್ಣಿನ ಕಾಚಿದ್ರವದಲ್ಲೂ ಇದು ಚೆನ್ನಾಗಿ ಕಾಣುತ್ತದೆ. ಇದರಲ್ಲಿ ಮುಖ್ಯವಾಗಿ ಲೋಳೆಪಾಲಿಸ್ಯಾಕರೈಡುಗಳೆಂಬ ದೊಡ್ಡ ಹಿಟ್ಟು ಸಕ್ಕರೆ ಅಣುಗಳಿರುವುವು. ಇವುಗಳಲ್ಲಿ ಹಯಲ್ಯುರೋನಿಕ್ ಆಮ್ಲದ ದ್ರಾವಣ ಮಂದವಾಗಿರುತ್ತದೆ. ಇದನ್ನು ಕರಗಿಸಿ ನೀರಾಗಿಸುವುದು ಹಯಲ್ಯೂರೋನಿಡೇ.  ಇದು ಕೆಲವು ಏಕಾಣು ಜೀವಿಗಳು, ರೇತುಕಣ ಸಾರಕಗಳಲ್ಲಿರುವುದು.  ಈ ಎಂಜೈಮಿನ ತಯಾರಿಕೆ ಮದ್ದನ್ನು ಚರ್ಮದಡಿ ಚುಚ್ಚಿದರೆ ಅಲ್ಲಿ ವಿಷಕಣಗಳು, ಏಕಾಣುಜೀವಿಗಳು, ಮತ್ತಿತರ ಸಣ್ಣ ಚೂರು ವಸ್ತುಗಳು ಅಲ್ಲಿಂದ ಎಲ್ಲಾ ದಿಕ್ಕುಗಳಿಗೂ ಹರಡಿಕೊಳ್ಳುವಂತೆ ಮಾಡುವುದು. ಈ ಸಕ್ಕರೆಯ ದೊಡ್ಡ ಕಣಗಳು, ಪ್ರೋಟೀನು ಲವಣಗಳಿರುವ ಜಲ್ಲಿಯೇ ನೆಲಗಟ್ಟು ವಸ್ತು. ಇದರಲ್ಲಿ ಏನು ವ್ಯತ್ಯಾಸವಾದರೂ ಒಂದೊಂದು ಜೀವಕಣ, ಅಂಗಾಂಶದ ಮೇಲೂ ಬಹಳ ಪ್ರಭಾವ ಬೀರುತ್ತದೆ. 

	ಕೂಡಿಸುವ ಅಂಗಾಂಶದ ಬಗೆಗಳು: ಜಾಳಾದ (ಏರಿಯೋಲಾರ್) ಅಂಗಾಂಶ ವಿರಳವಾಗಿರುವ ಅಲ್ಲಲ್ಲಿರುವ ಖಾಲಿ ಜಾಗಗಳಲ್ಲಿ ನೆಲಗಟ್ಟುವಸ್ತು ತುಂಬಿದ್ದು, ನಡುವೆ ಜೀವಕಣಗಳು, ಅಂಟು ಜನಕ, ಹಿಂಪುಟಿಕ ತಂತುಗಳು ಇರುವುವು. ವಿರಳವಾದ ಕೂಡಿಸುವ ಅಂಗಾಂಶ ಬೆಳ್ಳನೆಯ ಅಂಟುವಸ್ತುವಾಗಿ ಅಂಗಗಳ ನಡುವೆ, ರಕ್ತನಾಳಗಳೊಂದಿಗೆ ಅಂಗಗಳ ಒಳಗೂ ಇರುವುದು. 

	ಕೊಬ್ಬಿನ ಅಂಗಾಂಶ: ಇದರಲ್ಲಿ ವಿರಳವಾಗಿರುವ ಜಾಳಾದ ಅಂಗಾಂಶದಲ್ಲಿ ಕೊಬ್ಬಿನ ಜೀವಕಣಗಳೇ ಹೇರಳವಾಗಿರುವುವು.  
 
     ದಟ್ಟ ತಂತುವಿನ ಅಂಗಾಂಶ: ಅಂಟು ಜನಕದ ತಿರಿಗಳು ಇದರಲ್ಲಿ ದಟ್ಟವಾಗಿ ಅಡಕವಾಗಿದ್ದು, ಕೆಲವು ಹಿಂಪುಟಿಕ ಅಂಗಾಂಶಗಳ ತಂತುಗಳು ಅವುಗಳೊಂದಿಗಿನ ತಂತು ಮೊಳೆಕಣಗಳು ಇದರಲ್ಲಿ ಇರುತ್ತವೆ. ನೆಲಗಟ್ಟುವಸ್ತು ಇದರಲ್ಲಿಲ್ಲ. ಕಂಡರದಲ್ಲಿ ಇದ್ದ ಹಾಗೆ ಇದರ ತಂತುಗಳು ಉದ್ದುದ್ದವಾಗಿರಬಹುದು.  ನಿಜಚರ್ಮದಲ್ಲೂ ಕೀಲುಗಳ ಸುತ್ತಲೂ ಇರುವ ಕೀಲುಗವಚಗಳಲ್ಲೂ ಇರುವುದು ಹೀಗೆ.  ಮ್ಯಾಕ್ರೋಫೇಜುಗಳು ಕಚ್ಚಾ ನಡುರಚನಾಂಶದ (ಮಿಸೇಂಕೈಮಲ್) ಜೀವಕಣಗಳು ಇರುತ್ತವೆ. 

	ಕೀಲೋಳಿನ ಪೊರೆಗಳು: ಕೀಲುಗಳೊಳಗೆ ನಿಕಟವಾಗಿ ಅಂಟಿರುವ, ಕೀಲುಗಳ ಸುತ್ತುವರಿದ ಕೊಳವೆಯಂತಿರುವ ಪೊರೆಗಳಿವು. ರಕ್ತನಾಳಗಳಿರುವ ತೆಳುವಾದ ಕೂಡಿಸುವ ಅಂಗಾಂಶವಿದು. ಕೀಲೋಳಿನ ಜೀವಕಣಗಳು ಹಯಲ್ಯೂರೋನಿಕ್ ಆಮ್ಲ, ಪ್ರೋಟೀನು, ಲವಣಗಳಿರುವ ಮಂದವಾದ ಕೀಲೋಳಿನ (ಸೈನೋವಿಯಲ್) ದ್ರವವನ್ನು ಸುರಿಸುತ್ತವೆ. ಕೀಲಿನ ಮೊಗಗಳಿಗೆ ಇವು ಪುಷ್ಠಿ ನೀಡುವುದಲ್ಲದೆ ಮೆತುಚಾಲಕವು (ಲ್ಯೂಬ್ರಿಕೆಂಟ್) ಆಗಿರುವುವು. ಮೂಳೆಗಳ ಮೇಲೆ ಹಾದುಹೋಗುವೆಡೆಗಳಲ್ಲಿ ಕಂಡರಗಳ ಸುತ್ತಲೂ ಆವರಿಸಿರುವ ಒರೆಕವಚಗಳು(ಷೀತ್ಸ್) ಕೂಡ ಇಂಥ ಪೊರೆಗಳೆ. 		(ನೋಡಿ- ಕೀಲುಗಳು-ಮತ್ತು-ತಂತುಗಟ್ಟುಗಳು)

	ಮೆಲ್ಲೆಲುಬು: ಎಷ್ಟು ಒತ್ತಡ ಹೇರಿದರೂ ತಡೆವಷ್ಟು ಬಲವಾಗಿರುವ ರಚನೆ ಇದು. ಇದರಲ್ಲಿ ಮೂರು ಬಗೆ ಉಂಟು: ಗಾಜಂದ (ಹಯಲೀನ್), ಹಿಂಪುಟಿಕ, ತಂತುಕ (ಫೈಬ್ರಸ್). ಗಾಜಂದ ಮೆಲ್ಲೆಲುಬು ಹಾಗೆ ಕಾಣಲು ಜೀವಕಣಗಳ ನಡುವೆ ತುಂಬಿರುವ ಭಾಗದ ಗುಣವೇ ಕಾರಣ. ತಂತುವಿನ ಭಾಗವಾದ ಅಂಟುಜನಕ ಬಿಗುವಾಗಿರುವ ಅರೂಪದ ಬೊಂಪಿನಲ್ಲಿ (ಜೆಲ್) ಇರುವುದು. ಇದರಲ್ಲಿ ಬಹುಪಾಲು ಕಾಂಡ್ರಾಯ್ಟಿನ್ ಸಲ್ಫೇಟ್. ಈ ರಚನಾಂಶದಲ್ಲಿನ ಬಿಡುತಿಗಳೆಂಬ (ಲ್ಯಾಕ್ಯುನೆ) ತೆರಪುಗಳಲ್ಲಿ ಮೆಲ್ಲೆಲುಕಣಗಳು (ಕಾಂಡ್ರೋಸೈಟ್ಸ್) ಇರುವುವು.  ಕೀಲುಗಳ ಮೇಲುತಳಗಳ ಹೊರತಾಗಿಯೂ ಮೆಲ್ಲೆಲುಬು ಎಲ್ಲಿದ್ದರೂ ಅದನ್ನು ಇಪ್ಪದರಗಳ ಮೆಲ್ಲೆಲು ಸುತ್ತುಪೊರೆ(ಪೆರಿಕಾಂಡ್ರಿಯಮ್) ಆವರಿಸಿರುತ್ತದೆ. 

	ಬಿಡುತಿಗಳಲ್ಲಿರುವ ಜೀವಕಣಗಳ ವಿಭಾಗದಿಂದ ಒಳಗಿಂದಲೊ ಮೆಲ್ಲೆಲು ಸುತ್ತು ಪೊರೆಯಿಂದ ಹೊಸ ಜೀವಕಣಗಳ ಗುಣಿತದಿಂದ ಹೊರಗಿಂದಲೊ ಹೊಸ ಮೆಲ್ಲೆಲುಬು ವಿಕಾಸವಾಗುವುದು. ಕಶೇರುಕಗಳ ವಿಕಾಸದಲ್ಲಿ ಎಲುಗಟ್ಟು ಮೊದಲು ಗಾಜಂದ ಮೆಲ್ಲೆಲುಬಾಗಿ ನಂತರ ಮೂಳೆಯಾಗಿ ಪರಿವರ್ತನೆ ಹೊಂದುತ್ತದೆ. ಕೀಲುಗಳೊಳಗಿನ ಮೆಲ್ಲೆಲುಬು ಮಾತ್ರ ಮೂಳೆಯಾಗದೆ ಗಾಜಂದ ಮೆಲ್ಲೆಲುಬಾಗೆ ಇರುವುದು. ಮೆಲ್ಲೆಲುಬುಗಳೊಳಗೆ ಎಲ್ಲೂ ರಕ್ತನಾಳಗಳಿರವು.  ಆದರೆ ಅವುಗಳ ಜೀವಕಣಗಳಿಗೆ ಸಾಗುವ ಪುಷ್ಠಿ ವಸ್ತುಗಳು ಅವುಗಳಿಂದ ಹೊರಬೀಳುವ ವಿಸರ್ಜಕ ವಸ್ತುಗಳು ಮೆಲ್ಲೆಲು ಸುತ್ತುಪೊರೆಯಲ್ಲಿನ ರಕ್ತನಾಳಗಳು ಇಲ್ಲವೆ, ಕೀಲಲ್ಲಿರುವ ದ್ರವದಿಂದ ವಿತರಣೆಯಾಗುವುದು. ಇದರಿಂದಲೇ ಮೆಲ್ಲೆಲುಬಿನ ಗಾತ್ರ ಬೆಳವಣಿಗೆಗಳಿಗೆ ಮಿತಿಯಿರುತ್ತದೆ. ವಯಸ್ಸಾದಂತೆಲ್ಲಾ ಮೆಲ್ಲೆಲುಬು ಸಂಕುಚಿಸಿ ಗಡುಸಾಗಬಹುದು. ಹೊರಗಿವಿ, ಕಿರುನಾಲಗೆಗಳಲ್ಲಿ ಇರುವಂಥ ಹಿಂಪುಟಿಕ ಮೆಲ್ಲೆಲುಬಿನಲ್ಲಿ ಅಂಟು ಜನಕದೊಂದಿಗೆ ಹಿಂಪುಟಿಕ ತಂತುಗಳು ಇರುವುವು. ಶಾರ್ಕ್ ಮತ್ತು ರೇ ಮೀನುಗಳಲ್ಲಿ ಮೆಲ್ಲೆಲುಬೇ ಪ್ರಧಾನ ಆಧಾರಸ್ತಂಭವಾದ್ದರಿಂದ ಇವನ್ನು ಮೃದ್ವಸ್ಥಿ ಮೀನುಗಳೆನ್ನುವರು.

	ತಂತು ಮೆಲ್ಲೆಲುಬು ಗಾಜಂದ ಮೆಲ್ಲೆಲುಬಿಗಿಂತಲೂ ಹೆಚ್ಚಾಗಿ ಅಂಟುಜನಕ ತಂತುಗಳಿರುತ್ತವೆ. ಸಾಮಾನ್ಯವಾಗಿ ಒತ್ತಡ, ಎಳತಗಳ ನೇರಕ್ಕೆ ಈ ತಂತುಗಳಿರುವುವು.  ಇವುಗಳ ನಡುವೆ ಮೆಲ್ಲೆಲು ಕಣಗಳಿರುತ್ತವೆ.  ಮೆಲ್ಲೆಲುಬುಗಳಲ್ಲೆಲ್ಲಾ ತೀರಾ ಗಟ್ಟಿಗಿರುವ ಬಗೆ ಇದು. ಬೆನ್ನೆಲುಬುಗಳ ನಡುವಣ ಬಟ್ಟುಗಳು, ಕೀಲುಗಳ ಮೇಲು ತಳಗಳ ಅಂಚುಗಳು. ಮೂಳೆಯ ಕಂಡರ ಒಳಸೇರುವೆಗಳಲ್ಲೂ ಈ ಮೆಲ್ಲೆಲುಬಿರುವುದು. 

	ಮೂಳೆ: ಕೂಡಿಸುವ ಅಂಗಾಂಶಗಳ ಸರಳ ರೂಪಗಳ ಅಂಶಗಳೇ ಮೂಳೆಯಲ್ಲಿ ನಾಜೂಕಾಗಿ ಜೋಡಣೆಯಾಗಿ ಕಶೇರುಕಗಳಲ್ಲಿ ಎಲುಬುಗಳು ದೊಡ್ಡ ಅನಿಸುವ ರಚನೆಗಳಾಗಿವೆ. ಒಂದು ಆನೆಯ ಭಾರವನ್ನು ಹೊತ್ತು ಮುರಿಯದಿರುವ ಮೂಳೆಗಳಿವೆ. ಬೇರೆ ಮೂಳೆಗಳು ಹಗುರವಾಗಿದ್ದರೂ, ಗಡುಸಾಗಿದ್ದು, ದೊಡ್ಡ ಹಕ್ಕಿಗಳ ರೆಕ್ಕೆಗಳಿಗೆ ಸಾಕಾದಷ್ಟು ಸನ್ನೆ ಬಲವನ್ನು ನೀಡುವುವು. 

	ಮೂಳೆಗಳ ಹೊರಭಾಗವಾದ ರಗಟೆ (ಕಾರ್ಟೆಕ್ಸ್) ಸಾಮಾನ್ಯವಾಗಿ ಒತ್ತಾಗಿದ್ದು ಗಡುಸಾಗಿರುತ್ತದೆ. ಒಳಭಾಗವಾದ ಕುಸುರಿಯಲ್ಲಿ ಮೆಡುಲ ಸ್ಪಂಜಿನಂತೆ ಮೆತ್ತಗಿರುವುದೇ ಮಜ್ಜೆ. ಮಜ್ಜೆಯ ತುಂಬುಕೊಳವೆಗಳು ಫಲಕಗಳು, ಸರಳುಗಳು ಬಲೆಯಂತೆ ಹಣೆದಿರುವುವು. ಇವಕ್ಕೆ ಎಳೆದೂಲಗಳು (ಟ್ರೆಬಿಕ್ಯುಲೆ) ಎಂದು ಹೆಸರು. ಮೂಳೆ ಫಲಕಗಳು ಒತ್ತೊತ್ತಾಗಿ ಜೋಡಿಸಿದಂತಿರುತ್ತವೆ ಈ  ಎಳೆದೂಲಗಳು. ಈ ಬಲೆ ಹೆಣಿಗೆ ಹೆಚ್ಚು ಒತ್ತಡ ಬೀಳುವ ದಿಕ್ಕಿನಲ್ಲಿ ಬಲವಾಗಿರುತ್ತದೆ. ಅಂಗಾಂಶಾಂತರ ವಸ್ತುವಿನಲ್ಲಿರುವ ಸಣ್ಣ ಬಿಡತಿಗಳಲ್ಲಿ ಬಲಿತ ಎಲು ಕಣಗಳು (ಆಸ್ಟಿಯೋಸೈಟ್ಸ್) ಇರುವುವು. ಈ ಬಿಡುತಿಗಳೆಲ್ಲ ಬಲೆ ಹೆಣಿಗೆಯ ಹಾಗೆ ಕಿರು ಸಾಗುನಾಳಗಳ ಮೂಲಕ ಒಂದಕ್ಕೊಂದು ಸಂಬಂಧಿಸಿರುತ್ತವೆ. ಅಂಚಿನಲ್ಲಿರುವ ಬಿಡತಿಗಳಲ್ಲಿ  ಕಿರು ಸಾಗುನಾಳಗಳು ಎಳೆದೂಲಗಳ ಮೇಲುತಳದ ತನಕ ಇರುವುವು. ಸಣ್ಣ ಎಳೆದೂಲಗಳಲ್ಲಿ ರಕ್ತನಾಳಗಳಿಲ್ಲ.  ಆವರಿಸಿರುವ ಮಜ್ಜೆಯಲ್ಲಿನ ಅಂಗಾಂಶ ದ್ರವದಲ್ಲಿ ಮುಳುಗಿ ಬಿಡುತಿಗಳಲ್ಲಿರುವ ಎಲುಕಣಗಳಿಗೆ ಕಿರುಸಾಗು ನಾಳಗಳ ಮೂಲಕ ಪುಷ್ಠಿ ದೊರೆಯುತ್ತದೆ.  ಈ ಕಿರುಸಾಗು ನಾಳಗಳು ಪುಷ್ಠಿವಸ್ತುವನ್ನು ಕೊಂಚ ದೂರ ಮಾತ್ರ ಸಾಗಿಸಬಲ್ಲವಾದ್ದರಿಂದ ರಕ್ತನಾಳಗಳಿಲ್ಲದ ಎಳೆದೂಲ ಬಹಳ ದಪ್ಪವಾಗಿ ಬೆಳೆಯಲಾರದು. ಇನ್ನೂ ದಪ್ಪವಾಗಿ ಬೆಳೆವಲ್ಲಿ ರಕ್ತನಾಳಗಳಿರುತ್ತವೆ.  ದಟ್ಟನೆಯ ಮೂಳೆಯ ತುಂಬ ಇರುವ ರಕ್ತನಾಳಗಳ ಜೋಡಣೆಗೆ ಹ್ಯಾವರ್ಸಿಯನ್ ಮಂಡಲ ಎಂದು ಹೆಸರು. ಇದು ತೆಳು ಪೊರೆಗಳ ಸುರಳಿಗಳಿಂದಾಗಿದೆ. ಇದರ ಸಾಗುನಾಳಗಳ ಗೋಡೆಗಳ ರಚನೆ ಎಳೆದೂಲಗಳಂತೆಯೇ ಇದೆ. 

	ಮೂಳೆಯ ಜೀವಕಣಗಳ ನಡುವಣ ವಸ್ತುವಿನಲ್ಲಿ ಸುಣ್ಣ ಲವಣಗಳಿರುವ ಅಂಟು ಜನಕವಿದೆ. ಸುಣ್ಣದ ಲವಣಗಳಲ್ಲಿ ಕ್ಯಾಲ್ಸಿಯಂ ಫಾಸ್ಫೇಟ್ ಮುಖ್ಯ.  ಈ ಹರಳುಗಳೊಂದಿಗೆ ಕಾರ್ಬೊನೇಟುಗಳು, ಮೆಗ್ನೀಷಿಯಂ ಲವಣಗಳು ಅಂಟು ವಸ್ತುವಿನಲ್ಲಿದೆ. ಎಲುಮೊಳೆ ಕಣಗಳು, ತಂತುಗಳು, ಅಂಟುವಸ್ತು, ಫಾಸ್ಫೇಟೇಸುಗಳನ್ನು  ತಯಾರಿಸುತ್ತವೆ. ಅಂಗಾಂಶ ದ್ರವದಲ್ಲಿನ ಸುಣ್ಣ ಧಾತು ಬಿಡಿಯಾದ ಫಾಸ್ಫೇಟಿನೊಂದಿಗೆ ಕೂಡಿ ಕರಗದ ಸುಣ್ಣದ  ಫಾಸ್ಫೇಟು ಹರಳುಗಳಾಗುತ್ತವೆ.  ಹೀಗೆ ಸುತ್ತಲೂ ಎಲುಬನ್ನು ಕಟ್ಟಿಕೊಂಡು ಕಿರು ಸಾಗುನಾಳಗಳಲ್ಲಿ ಎಲುಮೊಳೆಕಣಗಳು ಚಾಚುಗಳನ್ನು ತೂರಿಸಿರುವುವಲ್ಲದೆ ಬಲಿತ ಎಲುಕಣಗಳಾಗಿ ಮೂಳೆಯ ರಚನೆಗೆ ಕಾರಣವಾಗಿರುವುವು. ಮೂಳೆಗಳು ಯಾವಾಗಲೂ ಇದ್ದವು ಇದ್ದಹಾಗೆ ಉಳಿಯವು. ಎಲುಮೊಳೆ ಕಣಗಳು, ಎಲು ಕಣಗಳು ಇಲ್ಲದೆಡೆಗಳಲ್ಲಿ ಮೂಳೆ ಹೇಗೋ ಒಂದು ಸಮವಾಗಿ ಕರಗಿಹೋಗುತ್ತಿರುವುದು.  ಹೀಗೆ ಕರಗಲು ಕಾರಣವೆಂದಿದ್ದ ಎಲುತವಿಕಗಳು (ಆಸ್ಟಿಯೋಕ್ಲಾಸ್ಟ್‍ಸ್) ಹಾಳಾಗುತ್ತಿರುವ ಎಲು ಮೊಳೆಕಣಗಳು ಒಂದಕ್ಕೊಂದು ಕೂಡಿಕೊಂಡು ಹಲನಡು ಬೀಜಗಳಿರುವ ಈ ರಾಕ್ಷಸ ಜೀವಕಣಗಳಾಗಿರುವುವು. (ಜಯಂಟ್ ಸೆಲ್ಸ್)

	ಮೂಳೆಯ ವಿಕಾಸ ಪೊರೆಯೊಳಗೂ ಮೆಲ್ಲೆಲುಬೊಳಗೂ ಮೊಳೆತರೂ ಮೂಲದ ಕ್ರಮ ಮಾತ್ರ ಒಂದೇ ಬಗೆ. ತಲೆಯೋಡಿನಲ್ಲಿ ಪೊರೆಯೊಳಗೆ ಎಲುಬು ಮೊಳೆಯುತ್ತದೆ. ಕೂಡಿಸುವ ಅಂಗಾಂಶದ ಪೊರೆಯೊಳಗಿಂದ ಎಲುಮೊಳೆಕಣಗಳಿದ್ದು ಎಲುಬು ತಯಾರಿಸುವುವು. ಕಂಕಾಳದ ಬಹುಪಾಲು ಮೊದಲಾಗಿ ಮೆಲ್ಲೆಲುಬಿನ ಅಡಿಪಾಯದ ಮೇಲೆ ವಿಕಾಸವಾಗುವ ಮೂಳೆಗಳೇ, ಮೆಲ್ಲೆಲು ಸುತ್ತುಪೊರೆಯಿಂದ ರಕ್ತನಾಳ ತುಂಬಿದ ಕೂಡಿಸುವ ಅಂಗಾಂಶದ ಮೆಲ್ಲೆಲುಬಿನೊಳಕ್ಕೆ ನುಗ್ಗಿ ಎಷ್ಟೋ ಬದಲಾವಣೆಗಳಾಗಿ ಮೂಳೆ ವಿಕಾಸವಾಗುವುದು. ಸುಣ್ಣಗೂಡದ ಮೆಲ್ಲೆಲುಬಿನ ಮೂಳೆ ಹೊಸ ಮೂಳೆ ಮೂಡುವುದು. ನೀಲ ಮೂಳೆಗಳ ಕಾವುಗಳಲ್ಲಿ ಹೀಗೆ ಎಲುಬು ವಿಕಾಸವಾಗಿ, ಗಂಡಸರಲ್ಲಿ 28ನೆಯ ವಯಸ್ಸಿನತನಕ ಮೂಳೆ ತುದಿಗಳು ಬೆಳೆಯುತ್ತಲೇ ಇರುವುವು. ಮೂಳೆ ಕೊನೆಗಳಲ್ಲಿ ಮೊದಲು ಆಚೆ ತುದಿಯಲ್ಲಿ ಹೊಸ ಮೆಲ್ಲೆಲುಬಾಗಿ ಆಮೇಲೆ ಒಳಗಿಂದ ಮೂಳೆಯಾಗುತ್ತಾ ಹೋಗುತ್ತದೆ. ಮೂಳೆಯ ದಪ್ಪನೆಯ ಸುತ್ತಳತೆಯು ಎಲುಸುತ್ತುಪೊರೆಯೊಳಗಿಂದ ಆಗುವುದು. ಮೂಳೆಗಳಲ್ಲಿ ಯಾವಾಗಲೂ ಜೀವವಿರುತ್ತದೆ. ಹೆಚ್ಚಿನ ಚಟುವಟಿಕೆ ಒಳಗೆ ನಡೆಯುತ್ತಿರುವುದು. ಅವುಗಳ ಮೇಲೆ ಬೀಳುವ ಒತ್ತಡಗಳಿಗೆ ತಕ್ಕ ಹಾಗೆ ಮೂಳೆಗಳು ಬೆಳೆಯುತ್ತಲೇ ಇರುವುವು. 

	ಎಲ್ಲ ಮೂಳೆಗಳೂ ಟೊಳ್ಳು. ಅವುಗಳ ಒಳಗಡೆ ಮಜ್ಜೆ ಇರುವುದು. ನೀಳ ಮೂಳೆಗಳಲ್ಲಿ ಕೊಬ್ಬುಗೂಡಿದ ಹಳದಿ ಮಜ್ಜೆ ವಿಕಾಸವಾಗುತ್ತದೆ. ರಕ್ತದ ಕೆಂಪು ಮತ್ತು ಬಿಳಿಯ ಕಣಗಳು ವಿಕಾಸವಾಗುವುದು ಕೆಂಪು ಮಜ್ಜೆಯಲ್ಲಿ. ಇದರೊಂದಿಗೆ ಕೊಂಚ ಕೊಬ್ಬು ಇರುತ್ತದೆ. ನೀಳ ಮೂಳೆಗಳ ತುದಿಗಳು, ಬೆನ್ನೆಲುಬುಗಳು, ಪಕ್ಕೆಲುಬುಗಳು, ಎದೆ ಚಕ್ಕೆಗಳಲ್ಲಿ ಕೆಂಪು ಮಜ್ಜೆ ಇರುತ್ತದೆ. 

 (ಡಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ